ಅಖಿಲ ಭಾರತ್ ಮಹಾಸಭಾ .ಇತಿಹಾಸ ಮತ್ತು ನಡೆದು ಬಂದ ದಾರಿ
ಭಾರತವನ್ನು ಒಂದು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವ ದಿಕ್ಕಿನಲ್ಲಿ 1882ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಸೇನಾನಿ ತದನಂತರದ ದಿನಗಳಲ್ಲಿ ಬಂಗಾಲ ಹಿಂದೂ ಮಹಾಸಭಾ,ಪುನಾ ಹಿಂದೂ ಮಹಾಸಭಾ ಮತ್ತು ಮದ್ರಾಸ್ ಹಿಂದೂ ಮಹಾಸಭಾ ಮುಂತಾದವು ಸ್ಥಾಪಿತವಾದವು, 1907ರಲ್ಲಿ ಎಲ್ಲಾ ಪ್ರಾಂತ್ಯದ ಹಿಂದೂ ಮಹಾಸಭಾಗಳು ಒಂದೇ ವೇದಿಕೆ ಅಡಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾವನ್ನು ರಚಿಸಿ ಅಂದಿನ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾದ ಲಾಲಾ ರಜಪತರಾಯರು ,ಭಾರತ ರತ್ನ ಮದನಮೋಹನ ಮಾಲವಿಯ, ಮಹಾರಾಜ ಮುನೀಂದ್ರ ಚಂದ್ರ ನಂದಿ, ರಾಜಾ ನರೇಂದ್ರನಾಥ, ರಮಾನಂದ ಚಟರ್ಜಿ, ಆರ್ ವಿಜಯ ರಾಘವಚಾರ್ಯ, ಡಾ ಎನ್ ಬಿ ಕರೆ, ಡಾ. ಬಿಎಸ್ ಮುಂಜಿ, ಡಾ ಸ್ಯಾಮ್ ಪ್ರಸಾದ ಮುಖರ್ಜಿ ಬಾಯಿ, ಪರಮಾನಂದ್, ಬಿಕ್ಷೊ ಉತ್ತಮ್, ಪ್ರೊಫೆಸರ್ ವಿ ಜಿ ದೇಶಪಾಂಡೆ ವಿನಾಯಕ ದಾಮೋದರ್, ದಿವಾಕರ್ ಮತ್ತು ಶ್ರೀಯುತ ಎನ್ ಎನ್ ಬ್ಯಾನರ್ಜಿ ಮುಂತಾದವರು ಈ ಸಂಘಟನೆಯ ಸಂಸ್ಥಾಪಕರುಗಳಾಗಿ 1915ರಲ್ಲಿ ಅಖಿಲ್ ಭಾರತ್ ಹಿಂದೂ ಮಹಾಸಭಾ ಒಂದು ರಾಜಕೀಯ ಸಂಘಟನೆಯಾಗಿ ನೋಂದಾವಣಿಯಾಯಿತು.
ಶ್ರೀ ವಿನಾಯಕ ವೀರ ಸಾವರ್ಕರ್, ಬಾಯಿ ಪರಮಾನಂದ,ಅಶೋಕ್ ಲಹರಿ ಮತ್ತು ಬಾಬಾ ಮದನ್ ಸಿಂಗ್ ಗೋಗಾ ಮುಂತಾದವರು ಬ್ರಿಟಿಷರ ವಿರುದ್ಧ ಹೋರಾಡಿ ಕಪ್ಪು ಸಾಗರವೆಂದೇ ಖ್ಯಾತಿಗೊಂಡ ಅಂಡಮಾನ್ ಸೆರೆವಾಸವನ್ನು ಅನುಭವಿಸಿದರು.
ಡಾ. ರಾಜೇಂದ್ರ ಪ್ರಸಾದ್, ಬಾಬು ಜಗಜೀವನರಾಮ್, ಶ್ರೀಯುತ ಜಯಕಾರ್ ಮುಂತಾದವರು ಹಿಂದೂ ಮಹಾಸಭಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ್ ಬಲಿರಾಮ ಹೆಗಡೆ ವಾರ್ ಹಿಂದೂ ಮಹಾಸಭಾ ಉಪಾಧ್ಯಕ್ಷರಾಗಿದ್ದರು.
Comments
Post a Comment